Tuesday, May 18, 2010

ನವೆಂಬರ್ ೨೦, ೨೦೦೯ ರ ಕನ್ನಡ ರಾಜ್ಯೋತ್ಸವವನ್ನು ನಮ್ಮ ಕಂಪನಿಯಲ್ಲಿ ಅದ್ದೂರಿಯಾಗಿ ಆಚರಿಸಬೇಕೆಂದು ಆಸಕ್ತರೆಲ್ಲ ಮೊದಲ ದಿನ ಮೀಟಿಂಗ್ ಸೇರಿದಾಗ ಅದೊಂದು ಸಮಾನ ಆಸಕ್ತರ ಗುಂಪಾಗಿ ಬೆಳೆಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ "ಉತ್ಸವ್ ೦೯" ಗೆ ನಾವೆಲ್ಲ ಸೇರಿ ಸ್ಕ್ರಿಪ್ಟ್ ಬರೆದು ನಮ್ಮ ೨ ನಾಟಕಗಳನ್ನು ಪ್ರೇಕ್ಷಕರ ಮುಂದಿಟ್ಟಾಗ ಸಿಕ್ಕ ಪ್ರೋತ್ಸಾಹ ಮತ್ತು ಆ ೨೦ ದಿನಗಳಲ್ಲಿ ನಾವು ಕಂಡುಕೊಂಡ ನಮ್ಮೊಳಗಿನ ಆಸಕ್ತಿಗಳು ಹಾಗೂ ಒಟ್ಟಾರೆ ಈ ಎಲ್ಲ ಪ್ರೋಸೆಸ್ ಗಳಿಂದ ಸಿಗುವ ಉತ್ಸಾಹ ನಮ್ಮನ್ನು ಒಂದು ಹೊಸಲೊಕಕ್ಕೆ ತೆರೆದುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಹೀಗೆ ಬೆಳೆದ ನಮ್ಮ ಹೊಸ ಹುಚ್ಚಿನ ಕನಸಿನ ಕೂಸು "inAction" ಎಂಬ ನಮ್ಮ ತಂಡ.

ನಿಜ ಹೇಳಬೇಕೆಂದರೆ ನಾವ್ಯಾರೂ ಪಳಗಿದ ನಟ, ನಟಿಯರು, ನಿರ್ದೇಶಕರು ಅಥವಾ ಬರಹಗಾರರಲ್ಲ. ವಸ್ತುನಿಷ್ಟ ಜೀವನದಿಂದ ಬೇಸತ್ತ, ಹೊಸತನದ ಹುಡುಕಾಟದಲ್ಲಿ ಜೊತೆಯಾದ ಸಮಾನ ದುಖಿಗಳು(Techies). ನಮ್ಮ ಪ್ರಯತ್ನದ ಮೂರು ಫಲಗಳನ್ನು ನಾವು ಈಗಾಗಲೆ ವೀಕ್ಷಕರ ಮುಂದಿಟ್ಟಿದ್ದೇವೆ. ಇವು ನಮ್ಮ ಪಯಣದ ಮೊದಲ ಹೆಜ್ಜೆಗಳಷ್ಟೇ. ಮುಂಬರುವ ದಿನಗಳಲ್ಲಿ ಇನ್ನೂ ಮಹತ್ತರವಾದದ್ದನ್ನು ವೀಕ್ಷಕರ ಮುಂದಿಡುವ ಹವಣಿಕೆಯಲ್ಲಿ ನಾವಿದ್ದೇವೆ. Sit, Relax and Enjoy these videos
http://www.youtube.com/watch?v=WnthmNqMgsE
http://www.youtube.com/watch?v=WnthmNqMgsE
http://www.youtube.com/watch?v=BwnszZMcosw

ನಮ್ಮ ವೀಡಿಯೋ ಗಳ ಬಗೆಗಿನ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

No comments:

Post a Comment